ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನಂತನ...; ಕುಟುಂಬ

ದುರ್ಗಾಪುರದ ಹೊರವಲಯದ ಒಂದು ಮೂಲೆಯಲ್ಲಿ ಹಳ್ಳದಿಂದ್ದ ಕೊಂಚವೇ ದೂರದಲ್ಲಿ , ಅನಂತನ ಇತ್ತೀಚೆಗಿನ ಪ್ರತಿದಿನಗಳು, ಅವನ ಕುಟುಂಬದ, ಹಳ್ಳದ ಎರಡೂ ಬದಿಯಲ್ಲಿ  ಹರಡಿಕೊಂಡಿರುವ ಕೃಷಿಭೂಮಿಯ ಹಿನ್ನೆಲೆಯಲ್ಲಿ ಪ್ರಾರಂಭವಾಗುತ್ತಿವೆ. ತನ್ನ ಹನ್ನೆರಡನೇ ತರಗತಿಯಿಂದಲೂ ಇದನ್ನು ನಿತ್ಯ ಆಸ್ವಾದಿಸಲು ಅವಕಾಶ ಸಿಗದೆ,  ಒಮ್ಮೊಮ್ಮೆ ಹಾಸ್ಟೆಲ್ ಅಲ್ಲಿ  ಏನೋ ಕಳೆದುಕೊಂಡಂತೆ ಇರುತ್ತಿದ್ದನು. ಮೈಸೂರು ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು,  NET-JRF ಮತ್ತು  NBHM ಪರೀಕ್ಷೆಗಳಲ್ಲಿ ಗೆಲುವು ಸಾಧಿಸಿದರೂ, ಪಿಎಚ್ಡಿ ಒಂದು ನಿರಾಸಕ್ತಿಯ ಜಂಜಾಟವೆಂದು; ಮುಂದೆ ಇನ್ನು ಈ ಡಿಗ್ರಿಗಳು ಎಂಬ ರೇಸ್ ಅಲ್ಲಿ ತಾನು  ಓಡುವುದಿಲ್ಲವೆಂದು ನಿರ್ಧರಿಸಿ  ಅವನು ತನ್ನ ಹಳ್ಳಿಗೆ ಮರಳಿದನು. ಇದನ್ನು ಮನೆಯಲ್ಲಿ ಯಾರು ಪ್ರತಿರೋದಿಸಲಿಲ್ಲ.   ಮನೆಯಲ್ಲಿ ಯಾರಿಗೂ ಅವನ ಎಂ .ಎಸ್ .ಸಿ   ಪಿಎಚ್ಡಿ ಇಟ್ಟುಕೊಂಡು ಮಾಡುವುದೇನು ಇರಲಿಲ್ಲ. ನಮ್ಮ ಮಗ ಇಲ್ಲೇ ನಮ್ಮ ಕಣ್ಣ ಮುಂದೆ, ನಮ್ಮ ಮನೆಯಲ್ಲಿಯೇ, ಸಂಪತ್ತನ್ನು ಅನುಭವಿಸುತ್ತ ಆನಂದದಿಂದ ಬಾಳ್ವೆ ಮಾಡುವಂತಾಗ ಬೇಕು  ಎಂಬುವುದು ಅವನ ಮನೆಯವರೆಲ್ಲರ ಆಸೆಯಾಗಿತ್ತು. ಪ್ರಕೃತಿಯ ಲಯ, ದನ ಕುರಿ ಕರಗಳ ಬೆಸುಗೆ   ಮತ್ತು ತನ್ನವರೊಂದಿಗೆ ನಿರಾತಂಕ್ಕವಾಗಿ ಯಾವುದೇ ಒತ್ತಡವಿಲ್ಲದೆ ಗಣಿತಶಾಸ್ತ್ರದಲ್ಲಿ ತಲ್ಲೀನವಾಗುವ...