ದುರ್ಗಾಪುರದ ಹೊರವಲಯದ ಒಂದು ಮೂಲೆಯಲ್ಲಿ ಹಳ್ಳದಿಂದ್ದ ಕೊಂಚವೇ ದೂರದಲ್ಲಿ , ಅನಂತನ ಇತ್ತೀಚೆಗಿನ ಪ್ರತಿದಿನಗಳು, ಅವನ ಕುಟುಂಬದ, ಹಳ್ಳದ ಎರಡೂ ಬದಿಯಲ್ಲಿ ಹರಡಿಕೊಂಡಿರುವ ಕೃಷಿಭೂಮಿಯ ಹಿನ್ನೆಲೆಯಲ್ಲಿ ಪ್ರಾರಂಭವಾಗುತ್ತಿವೆ. ತನ್ನ ಹನ್ನೆರಡನೇ ತರಗತಿಯಿಂದಲೂ ಇದನ್ನು ನಿತ್ಯ ಆಸ್ವಾದಿಸಲು ಅವಕಾಶ ಸಿಗದೆ, ಒಮ್ಮೊಮ್ಮೆ ಹಾಸ್ಟೆಲ್ ಅಲ್ಲಿ ಏನೋ ಕಳೆದುಕೊಂಡಂತೆ ಇರುತ್ತಿದ್ದನು. ಮೈಸೂರು ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು, NET-JRF ಮತ್ತು NBHM ಪರೀಕ್ಷೆಗಳಲ್ಲಿ ಗೆಲುವು ಸಾಧಿಸಿದರೂ, ಪಿಎಚ್ಡಿ ಒಂದು ನಿರಾಸಕ್ತಿಯ ಜಂಜಾಟವೆಂದು; ಮುಂದೆ ಇನ್ನು ಈ ಡಿಗ್ರಿಗಳು ಎಂಬ ರೇಸ್ ಅಲ್ಲಿ ತಾನು ಓಡುವುದಿಲ್ಲವೆಂದು ನಿರ್ಧರಿಸಿ ಅವನು ತನ್ನ ಹಳ್ಳಿಗೆ ಮರಳಿದನು. ಇದನ್ನು ಮನೆಯಲ್ಲಿ ಯಾರು ಪ್ರತಿರೋದಿಸಲಿಲ್ಲ. ಮನೆಯಲ್ಲಿ ಯಾರಿಗೂ ಅವನ ಎಂ .ಎಸ್ .ಸಿ ಪಿಎಚ್ಡಿ ಇಟ್ಟುಕೊಂಡು ಮಾಡುವುದೇನು ಇರಲಿಲ್ಲ. ನಮ್ಮ ಮಗ ಇಲ್ಲೇ ನಮ್ಮ ಕಣ್ಣ ಮುಂದೆ, ನಮ್ಮ ಮನೆಯಲ್ಲಿಯೇ, ಸಂಪತ್ತನ್ನು ಅನುಭವಿಸುತ್ತ ಆನಂದದಿಂದ ಬಾಳ್ವೆ ಮಾಡುವಂತಾಗ ಬೇಕು ಎಂಬುವುದು ಅವನ ಮನೆಯವರೆಲ್ಲರ ಆಸೆಯಾಗಿತ್ತು. ಪ್ರಕೃತಿಯ ಲಯ, ದನ ಕುರಿ ಕರಗಳ ಬೆಸುಗೆ ಮತ್ತು ತನ್ನವರೊಂದಿಗೆ ನಿರಾತಂಕ್ಕವಾಗಿ ಯಾವುದೇ ಒತ್ತಡವಿಲ್ಲದೆ ಗಣಿತಶಾಸ್ತ್ರದಲ್ಲಿ ತಲ್ಲೀನವಾಗುವಂತ ಜೀವನವನ್ನು ನಡೆಸಲು ಹಂಬಲಿಸುತ್ತಿದ್ದ ಅನಂತ, ವಿಶಾಲ ಹೊಲಗಳು ಮತ್ತು ಅವನ ಕೂಡು ಕುಟುಂಬದ ಪೂರ್ವಜರ ಮನೆಯ ಕಂಬಗಳಿಗೆ , ಮರದ ಹಟ್ಟಕ್ಕೆ, ಗ್ರಂಥಾಲಯದಂತಿದ್ದ ಅವನ ಕೋಣೆಗೆ ಮತ್ತು ಹೊಳೆಯ ದಂಡೆಯಲ್ಲಿರೋ ಬಂಡೆ ಹಾಗು ಅದರ ಪಕ್ಕದಲ್ಲಿರುವ ಹೆಸರು ತಿಳಿಯದಿರೋ ಮರದ ನೆರಳಿಗೆ ಮೀಸಲಿಟ್ಟ . ಗ್ರಾಮೀಣ ಜೀವನದ ಸರಳ ಸಂತೋಷಗಳ ಮೆಚ್ಚುಗೆಯಲ್ಲಿ ಬೇರೂರಿರುವ ಅವನ ಈ ನಿರ್ಧಾರವು, ಅವನ ಕುಟುಂಬವು ಭೂಮಿಯೊಂದಿಗೆ, ಪರಂಪರೆಯೊಂದಿಗೆ ಮತ್ತು ಪರಿಸರದೊಂದಿಗೆ ಎಂತಾ ಆಳವಾದ ಸಂಪರ್ಕವನ್ನು ಹೊಂದಿದೆ ಎಂದು ಒತ್ತಿಹೇಳಿತು.
ಹಸಿರು ಹೊಲಗಳು, ತೋಟಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಇನ್ನಷ್ಟು - ಮತ್ತಷ್ಟು ದೃಷ್ಟಿಯಾಗಲೆಂದೇ ಹರಿಯುತಿದ್ದ ಹಳ್ಳ. ಇವುಗಳ ಮಧ್ಯ, ಕಂಬ ಮತ್ತು ತೊಲೆಗಳಿಂದಲೇ ಕೂಡಿದ್ದ, ರೆಡ್ ಆಕ್ಸೈಡ್ ನೆಲದ, ಕೆಂಪು ಹಂಚಿನ , ಒಂದು ಅಂತಸ್ಥತಿನ ಭವ್ಯವಾದ ಪೂರ್ವಜರ ಮನೆಯಲ್ಲಿ ಸಂಬಂಧಗಳ ಭಾಂಧವ್ಯದಿಂದ ಬೆಸೆದು ಪ್ರೀತಿ ನಂಬಿಕೆಗಳ ವಾತ್ಸಲ್ಯಗಳಿಂದ ಹಬ್ಬಿದ ಮಾವಿನ ತೋಪಿನ ಹಾಗಿತ್ತು ಅನಂತನ ಕುಟುಂಬ. ವಿಸ್ತಾರವಾದ ಮನೆಯು ತಲೆಮಾರುಗಳ ಹಂಚಿಕೆಯ ಇತಿಹಾಸ ಮತ್ತು ಬಾಳಿಕೆ ಬರುವ ಬಂಧಗಳಿಗೆ ಸಾಕ್ಷಿಯಾಗಿತ್ತು. ಮನೆಯ ಮುಂಬದಿಯಲ್ಲಿ ಇರುವ ಖಾಲಿ ಜಾಗ ದಾಟಿದೊಡನೆ ಸಿಗುವ ವಿಲಕ್ಷಣವಾದ ಹಳ್ಳಿಯ ರಸ್ತೆ ಗ್ರಾಮೀಣ ಜೀವನದ ಲಯಕ್ಕೆ ಒಂದು ನೋಟವನ್ನು ನೀಡುತಿತ್ತು.
ಮನೆಯ ದೊಡ್ಡ ಗಂಡುಮಗ ಅಮರಪ್ಪ. ಅವನ ಹೆಂಡತಿ ಪ್ರೇಮ. ಇವರು ಅನಂತನಿಗೆ ದೊಡ್ಡಪ್ಪ ಮತ್ತು ದೊಡ್ಡಮ್ಮ. ಅಮರಪ್ಪನ ತಮ್ಮ, ಸ್ವಾಮಿ (ಸ್ವಾಮಣ್ಣ); ಅನಂತನ ತಂದೆ. ಸ್ವಾಮಿಯ ತಮ್ಮ ಸುರೇಶ. ಲಕ್ಷಿ ಹಾಗು ರೇವತಿ ಅನಂತನ ಅಮ್ಮ ಮತ್ತು ಚಿಕ್ಕಮ್ಮ. ಮನೆಯ ಮುಂದಾಳತ್ವ ಎನ್ನುವುದಕ್ಕಿಂತ ಹಣಕಾಸಿನ ಜವಾಬ್ದಾರಿ, ಅಡಿಕೆ ಮಂಡಿಯ ಜಂಜಾಟ, ಹೊಲಗದ್ದೆಯ ತಾಪತ್ರಯ ಹೀಗೆ ಅನೇಕ ತಲೆನೋವ್ವುಗಳಂತಿದ್ದ ಕೆಲಸಗಳನ್ನು ಅಮರಪ್ಪ ಸ್ವಾಮಣ್ಣನಿಗೆ ಬಿಟ್ಟು ಬಿಟ್ಟಿದ್ದ. ಅಮರಪ್ಪ ತಾನಾಯಿತು ತಾನು ರಿಟೈರ್ಡ್ ಆದಮೇಲೂ ಭೇಟಿ ನೀಡಬೇಕು ಅಂತ ಅಂದುಕೊಂಡಿರೋ, ತಾನು ವಿದ್ಯಾರ್ಥಿಯಾಗಿದ್ದಾಗ ಭಾರಿ ಹೋರಾಟ ಇನ್ಫ್ಲುಯೆನ್ಸ್ ಎಲ್ಲ ಬಳಸಿ ಕಟ್ಟಿಸಿಕೊಂಡಿದ್ದಸರ್ಕಾರಿ ಶಾಲೆಯಾಯಿತು ಅನ್ನುವಂತ ಸರಳ ಮೇಷ್ಟ್ರು. ಅಮರಪ್ಪನ ಮೇಷ್ಟ್ರು ಗಿರಿಯಿಂದ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರೀಮಂತಿಕೆ ಅಡ್ಡಿಯಾಗಲಿಲ್ಲ; ಅದರಲ್ಲೂ ಅನಂತನ ವಿಪರೀತ ಓದಿನ ಹುಚ್ಚು ಒಂದು ಮಾದರಿಯಾಗಿತ್ತು ಅವರಮನೆಯಲ್ಲಿ. ಆದರೆ ಸ್ವಾಮಿಗೆ ಅನಂತನ ಹೆಗಲು ಸಿಗುವುದಿಲ್ಲ ಎನ್ನುವುದು ಒಂದು ಸಮಸ್ಯೆಯಾಗಿ ಕಾಡದೆ ಹೋಗಿದ್ದು ವಿಕ್ರಮನಿಂದ, ಅಮರಪ್ಪನ ಮಗ. ಇನ್ನು ಸುರೇಶನಿಗೆ ಎರಡು ಹೆಣ್ಣು ಪಿಳ್ಳೆಗಳು ಇನ್ನೂ ಚಿಕ್ಕವು. ಮನೆಯ ಎಲ್ಲಾರ ಮುದ್ದು ಮಗಳಗೀದ್ದವಳು ಸ್ವಾಮಣ್ಣನ ಎರಡನೇ ಕೂಸು ಸಾಗರಿ. ಈ ತುಂಬಿದ ಮನೆಯ ನಡುವೆ, ಗತಕಾಲದ ಜೀವಂತ ಕೊಂಡಿಯಾದ ಅನಂತನ ಅಜ್ಜಿ ಸಾವಿತ್ರಿ (ಸಾವಜ್ಜಿ) ಕುಟುಂಬದ ಪ್ರೀತಿಯ ಸದಸ್ಯರಾಗಿ ಉಳಿದರು, ಅವರ ಬುದ್ಧಿವಂತಿಕೆ ಮತ್ತು ಅನುಭವವು ಭವಿಷ್ಯದ ಪೀಳಿಗೆಗೆ ಬೆಳಕಿನ ದೀಪವಾಗಿ ಕಾರ್ಯನಿರ್ವಹಿಸುತಿತ್ತು.
ಅಮರಪ್ಪ ಮತ್ತು ಪ್ರೇಮರ ಮದುವೆ ಊರಲ್ಲಿ ನೆಡೆದ ಸುಸೂತ್ರವಾದ ಮೊದಲ ಅನ್ಯ ಜಾತಿಯ ಪ್ರೇಮ ವಿವಾಹ. ಪ್ರೇಮ ಅದೇ ಊರಿನವಳು. ಅಮರಪ್ಪನ ಗೆಳೆಯ ಅಜಯ ತನ್ನ ತಂಗಿ ಪ್ರೇಮಾಳ ಮತ್ತು ಅಮರಪ್ಪನ ಮದುವೆಯಲ್ಲಿ ಒಂದೇ ಒಂದು ಅಡ್ಡ ಸದ್ದು ಊರಲ್ಲಿ ಓಡಾಡಲು ಬಿಡದಂತೆ ನೋಡಿಕೊಂಡಿದ್ದ. ಇಂದು ಈ ಎರಡೂ ಮನೆಗಳ ಮಧ್ಯ ಪಾದರಸದಂತ್ತೆ ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುವವಳು ಅಜಯನ ಪುತ್ರಿ ಅವನಿ. ಅನಂತನ ಅಸ್ತಿತ್ವದ ಅಂತರಂಗದಲ್ಲಿ ಅವನಿಯು ಬೆಳಕಿನ ದೀಪವಾಗಿದ್ದು, ಅವಳ ಉಪಸ್ಥಿತಿಯು ಅವನ ಜಗತ್ತನ್ನು ಬೆಳಗಿಸಿತ್ತು. ಅವರ ಬಾಲ್ಯದ ದಿನಗಳಿಂದಲೂ, ಅವರು ಸಮಯದ ಅಂಗೀಕಾರವನ್ನು ವಿರೋಧಿಸುವ ಬಂಧವನ್ನು ಬೆಸೆದುಕೊಡ್ಡಿದ್ದಾರೆ. ಅವರು ಹಂಚಿಕೊಂಡ ಅನುಭವಗಳು ಮತ್ತು ಪ್ರಣಯದ ಹೊಳೆಯಲ್ಲಿ ಮುಳುಗಿದ ಸ್ನೇಹ ಅವರ ಪ್ರೀತಿಯನ್ನು ಇನ್ನಷ್ಟ್ಟು ದಿನೇ ದಿನೇ ಬಲಪಡಿಸುತ್ತಿದೆ. ಅವನಿ, ಮೋಡಿ ಮತ್ತು ಬುದ್ಧಿಯ ಅವತಾರವಾಗಿದ್ದಳು. ಅವಳು ಜ್ಞಾನ ಮತ್ತು ಕುತೂಹಲದ ಆಳಗಳನ್ನು ಹೊಂದಿದ್ದಳು. ಡಿಗ್ರಿ ಮುಗಿಸಿದ್ದ ಆಕೆ ಅನಂತನಿಗಿಂತಲೂ ಬಹುಬೇಗ ಡಿಗ್ರಿ ಮುಖೇನ ವಿಧ್ಯಾಬ್ಯಾಸಯಕ್ಕೆ ವಿದಾಯವೇಳಿ, ಇತಿಹಾಸದ ಆಳವಿವಾದ ಅಧ್ಯಾಯನಕ್ಕೆ ಮಾರು ಹೋಗಿದ್ದಳು.
ಅನಂತ ಪ್ರತಿ ನಿತ್ಯ ಮುಂಜಾನೆ ಒಂದೆರಡು ಗಂಟೆ ಶಾಲೆಯಲ್ಲಿ ದೊಡಪ್ಪನ ಹಿಂದೆ ಮುಂದೆ ಓಡಾಡುತ್ತ ದೊಡಪ್ಪ ಕಣ್ಮರೆಯಾದೊಡನೆ ಅಲ್ಲಿಂದ ಗೂಟ ಕಿತ್ತು, ತೋಟಕ್ಕೆ ಬಂದು ಕೆಲಸದ್ದಿಲ್ಲಿ ನಿರತನಾಗಿರುತಿದ್ದ ವಿಕ್ರಮನ ಹಿಂದೆ ಮುಂದೆ ಓಡಾಡುತ್ತ, ಇಲ್ಲವಾದರೆ ತೋಟದಲ್ಲಿರೊ ಗುಡಿಸಲಲ್ಲಿ ಯಾವುದಾದ್ರೂ ಲೆಕ್ಕವನ್ನು ಮ್ಯಾಥ್ಸ್ಟ್ಯಾಕ್ ಎಕ್ಸ್ಚೇಂಜ್ ಅಲ್ಲಿ ನೋಡುತ್ತಾ... ಮನೆಯ ಎಲ್ಲಾ ಕೆಲಸ ಮುಗಿಸಿ ಯಾವಾಗ ಅವನಿ ಕರೆ ಮಾಡುತಾಳಲೋ ಅಂತ ಕಾಯೋದು, ಕರೆ ಬಂದೊಡನೆ ಬರ್ ಬರ್ ಅಂತ ಬೈಕ್ ಹತ್ತಿ ಅವನಿ ಮನೆಗೆ ಹೋಗಿ ಅತ್ತೆ ಕೊಡೊ ಟೀ ಖಾಫಿ ಕುಡಿದು ಒಂದಿಷ್ಟ್ಟು ಹರಟೆ ಹೊಡೆದು ನಾಜೂಕಾಗಿ ಏನೋ ಒಂದು ನೆಪ ಹೇಳಿ ಅವನಿಯನ್ನು ಕರೆದುಕೊಂಡು ಬೈಕಿನಲ್ಲಿ ಊರ ಸುತ್ತ ಮುತ್ತಲಿನ ಗುಡ್ಡ, ಹಳ್ಳ, ಕೋಟೆ ದೇವಸ್ಥಾನ ಅಂತ ಸುತ್ತೋದು. ಕೊನೆಯಲ್ಲಿ ದಿನದ ಎಲ್ಲಾ ಕರ್ತವ್ಯ ಮುಗಿಸಿ ಇನ್ನೇನು ನಾನು ಹೊರಟೆ ಎಂದು ಸೂರ್ಯ ತನ್ನ ತಾಪ ಕುಂದಿಸಿದಾಗ, ಸಂಜೆ ಹಳ್ಳದ ಬಂಡೆ ಹತ್ತಿರ ಬಂದು ಗಣಿತದಲ್ಲಿ ಮುಳಿಗೇಳೋದು, ಆಗೊಮ್ಮೆ ಈಗೊಮ್ಮೆ ಜೊತೆಗೆ ಬರೋ ಅವನಿಯೊಡನೆ ಪೋಲಿಯಾಗೋದು. ಇದು ಅನಂತನ ದಿನ. ಇದು ದಿನದ ಮೇಲುನೋಟವಷ್ಟೇ. ಅನಂತನ ದಿನದ ನಾಡಿಯೇ ಅವನಿ ಹಾಗು ಅನಂತನ ಜಗಳ, ಪ್ರೇಮ, ಅಂತಕರಣಗಳು ಇರುವಿಕೆಯನ್ನು ಮರೆವಷ್ಟು ಸಂವಹನ, ಚರ್ಚೆ ... ಅವನಿಯು ಇತಿಹಾಸದ ಎಳೆ ಎಳೆಯಲ್ಲಿ ಹೊಕ್ಕಿರೋ ಕಲೆ, ಸುಗಂಧದ ಜಾಡು ಕಂಡು ಹಿಡಿದು ಅವುಗಳನ್ನು ಕೇಳಲು ಮತ್ತು ಆಕೆಯ ಮನಸಲ್ಲಿ ಮೂಡಿದ್ದ ಪ್ರಶ್ನೆಗಳು ಹಾಗು ಗೊದಲಗಳನ್ನು ಅರಿಯುವಂತ ಇದ್ದಂತ ಒಂದೇ ಪ್ರಾಣಿಯಾದ ಅನಂತನಿಗೆ ಹೊತ್ತು ತರುತ್ತಿದ್ದಳು. ಗಣಿತಶಾಸ್ತ್ರದ ಮಜಲುಗಳು, ವಿಸ್ಮಯಗಳು ಮತ್ತು ಉಪಯೋಗಗಳನ್ನು ಅಂನತನಿಂದ್ದ ಕೇಳಿ ಬೆರಗಾಗುತ್ತ, ಅನಂತ ನೊಡನೆ ಸದಾ ಗಣಿತದ ಇತಿಸಾಸದ ಸಾರವನ್ನು ಚರ್ಚಿಸುತ್ತಾ, ತುಟಿಯ ಜೇನಿಂದ ಇತಿಹಾಸದ ಸಿಹಿ, ಎದೆಯ ಉಸಿರಾಟವೇ ನಿಲ್ಲುವಂತಹ, ಹೃದಯಗಳ ಬಡಿಡ್ತದ ಸಪ್ಪಳ ಪರಸ್ಪರರ ಹೃದಗಳಿಗೆ ತಿಳಿಯುವಷ್ಟು, ಎದೆಗಳ ಮಧ್ಯ ಗಾಳಿಯೂ ತೂರದಷ್ಟು ಬಿಗಾದ ಅಪ್ಪುಗೆಯೊಂದಿಗೆ ಅವನಿ ಇಂದ ಬರುತ್ತಿದ್ದ ಸರಳ ಕ್ಲಿಷ್ಟ ಗಣಿತದ ಪ್ರಶ್ನೆಗಳಿಗೆ ಶರಣಾಗಿದ್ದ ಅನಂತ. ಇವರಿಬ್ಬ್ಬರ ಸರಸ ಸಲ್ಲಾಪ, ಗಣಿತ ಇತಿಹಾಸವೇ ಅಂತನ ಬದುಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ