ನರಬೇಕಷ್ಟೆ ಏಳಿ ಎದ್ದೇಳಿ ಮೂಢ ಜನರೆ ನಿಮ್ಮ ಬಾಗಿದ ಬೆನ್ನ ಸೆಟೆದು ನಿಲ್ಲಿ ಬಾಗಿ ಬೆಂಡಾಗಿರುವ ನಿಮ್ಮ ಬೆನ್ನ ಮೇಲೆ ಚಾದರವನ್ನು ಹಾಸಿರುವರು ನಿಮ್ಮ ತೂತು ಚೋಬಿನಿಂದ ಉದುರಿದ ಚಿಲ್ಲರೆ ಹಾಯ್ದು ನಿಮಗೆ ಕೊಟ್ಟಿರುವರು ಹಾಯ್ದು ಕೊಡುವ ನಾಚಿಗೆಡು ಆಟದಲ್ಲಿ ನಿಮ್ಮ ಶ್ರಮದ ಹಣವನ್ನು ಅವರೇ ನುಂಗಿರುವರು ಹಾಸಿರುವ ಚಾದರದ ಮೇಲೆ ಅದೇ ಹಣವನ್ನು ಎಲೆ ಆಟದಲ್ಲಿ ಪಣಕ್ಕಿಟ್ಟು ಜೂಜಾಡುತಿರುವರು ಸೋತು ಗೆದ್ದು ಕೊಚ್ಚೆ ಎರಚಾಡಿ ಹೊಡೆದಾಡಿ ಬಡಿದಾಡಿ ಒಂದಾಗಿ ಅವರವರಲ್ಲೆ ಹಣವನ್ನು ಹಂಚಿಕೊಡಿರುವರು ಜಾತಿ ಪಾತಿ ಅಂತಸ್ತು ಗಿಂತಸ್ತಿನ ಬಣ್ಣ ಗಿಣ್ಣಗಳ ಗೋಜಿಗೊಗಬೇಡಿ ಎದ್ದು ನಿಲ್ಲಲು ನರಬೇಕಷ್ಟೆ ಇನ್ನೇನಿಲ್ಲ ಎದ್ದು ನಿಲ್ಲಿ ಬೆನ್ನ ಮೇಲೆ ನಡೆಯುತ್ತಿರುವ ಕಣ್ಣಿಗೆ ಕಾಣದಿರುವ ಸ್ವಾರ್ಥ ಚದುರಂಗ ಇಲ್ಲವಾಗಿಸಿ ಬರವಣಿಗೆ: ಮಂಜುನಾಥ ಎಂ ಆರ್
ಇಲ್ಲಿ, ನನ್ನ ಆವಿಷ್ಕಾರಗಳು, ಸೃಷ್ಟಿಗಳು ಮತ್ತು ಕ್ಯಾಮೆರಾದ ಮೂಲಕ ಸೆರೆಹಿಡಿಯಲಾದ ಕ್ಷಣಗಳು ಮತ್ತು ಬರಹಗಳನ್ನು ನಾನು ವ್ಯಕ್ತಪಡಿಸುತ್ತೇನೆ. ಇದು ಜಗತ್ತಿಗೆ ಪ್ರದರ್ಶನವಲ್ಲ ಆದರೆ ನನ್ನನ್ನು ನಾನು ವ್ಯಾಖ್ಯಾನಿಸುವ ಮಾರ್ಗವಾಗಿದೆ. ನನ್ನ ಬಗ್ಗೆ ನಡೆಯುತ್ತಿರುವ ಅನ್ವೇಷಣೆ.